ಯುವಜನರು ಅಗಾಧ ಶಕ್ತಿ ಮತ್ತು ಉತ್ಸಾಹದ ಚಿಲುಮೆಗಳಾಗಿರುತ್ತಾರೆ. ಅವರಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ನಮಗೆ ಅರಿವಿದೆ. ಜೀವನಶೈಲಿ ಮತ್ತು ನಡವಳಿಕೆ-ಸಂಬಂಧಿತ ಸಮಸ್ಯೆಗಳಾದ ಮಾದಕವಸ್ತು ಬಳಕೆ, ಸ್ವಯಂ-ಹಾನಿ ಉಂಟುಮಾಡುವುದು, ಲಿಂಗ ಆಧಾರಿತ ಹಿಂಸಾಚಾರದತ್ತ ಒಲವು, ಕಡಿಮೆ ಪೋಷಣೆ ಮತ್ತು ದೈಹಿಕ ನಿಷ್ಕ್ರಿಯತೆಯು ಯುವಜನರಲ್ಲಿ ಅತಿ ಹೆಚ್ಚು ಮರಣ ಮತ್ತು ಅಂಗವೈಕಲ್ಯಕ್ಕೆ ವೇಗವಾಗಿ ಕಾರಣವಾಗುತ್ತಿದೆ. ಈ ಹೆಚ್ಚಿನ ಕಾರಣಗಳು ಯವ್ವನದಲ್ಲೇ ಪ್ರಾರಂಭವಾಗುತ್ತದೆ. ಭವಿಷ್ಯದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಸಂಭವಿಸಬಹುದಾದ ೧೦ ಸಾವುಗಳಲ್ಲಿ ೭ ಸಾವುಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಉಂಟಾಗುತ್ತದೆ ಎಂಬ ಅರಿವಿದೆ. ಈ ಕುರಿತು ನಾವು ಕಾರ್ಯಪ್ರವ್ರತ್ತರಾಗುವ ಸಮಯವಿದು. ಆದಾಗ್ಯೂ, ಈ ಪ್ರಮುಖ ಜನಸಂಖ್ಯೆಯನ್ನು ಸಬಲರನ್ನಾಗಿಸಲು ಇಲ್ಲಿಯವರೆಗೆ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ನಮಗೆ ತಿಳಿದಿರುವಂತೆ ಯುವಕರ ಸಮಸ್ಯೆಗಳು ಕಡಿಮೆ ಗಮನ ಸೆಳೆಯುತ್ತವೆ. ಇದಲ್ಲದೇ ಅಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ ಮತ್ತು ಸಾಕ್ಷರತಾ ಪ್ರಮಾಣಗಳನ್ನು ಗಮನಿಸಿದಾಗ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸೇವೆಗಳನ್ನು ಒದಗಿಸುವುದು ಸವಾಲಿನ ಕೆಲಸವಾಗಿದೆ.
ಈ ಬಗ್ಗೆ ಯುವ ಸಬಲೀಕರಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳು, ಮೂಲಭೂತ ಅಗತ್ಯತೆಗಳು ಮತ್ತು ಆಯೋಜನಾ ತಿದ್ದುಪಡಿಯ ಅವಶ್ಯಕತೆ ಇದೆ. ಇದನ್ನು ಪರಿಗಣಿಸಿ ಕರ್ನಾಟಕ ಸರಕಾರವು “ರಾಷ್ಟಿçÃಯ ಯುವ ನೀತಿಗೆ” ಅನುಗುಣವಾಗಿ ಯುವ ನೀತಿ ೨೦೨೧ನ್ನು ರೂಪಿಸಿತು. ಇದು ಯುವಜನರು ತಮ್ಮ ತಮ್ಮ ಜೀವನವನ್ನು ರೂಪಿಸಿಕೊಂಡು, ತಮ್ಮ ಗುರಿಯನ್ನು ಸಾಧಿಸಿ, ತಮ್ಮ ಜೀವನದ ಏಳ್ಗೆಗೆ ತಾವೇ ರೂವಾರಿಗಳು ಎಂಬ ದೂರದರ್ಶಿತ್ವವನ್ನು ಪ್ರತಿನಿಧಿಸುತ್ತದೆ..
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ನಮ್ಮ ರಾಜ್ಯದ ಯುವಜನರಿಗಾಗಿ “ಯುವ ಸ್ಪಂದನ” ಕಾರ್ಯಕ್ರಮವನ್ನು ನಾವು ಪ್ರಾರಂಭಿಸಿದ್ದಕ್ಕೆ ನನಗೆ ಸಂತೋಷವಿದೆ. ನಮ್ಮ ಯುವ ಜನರು ಈ ಸೇವೆಯ ಸದ್ಬಳಕೆ ಮಾಡಿಕೊಳ್ಳುತ್ತಾರೆ ಮತ್ತು ಅವರಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಕಾರ್ಯಕ್ರಮವು ಬಹಳ ಮುಂದುವರೆಯುತ್ತದೆ ಮತ್ತು ನಮ್ಮ ಯುವಜನರಿಗೆ ಅವರ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. “ಯುವ ಸ್ಪಂದನ” ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಕರ್ನಾಟಕ ರಾಜ್ಯದಾದ್ಯಂತ ಯುವ ಸ್ಪಂದನಾ ಅನುಷ್ಠಾನಗೊಳಿಸುವ ಸವಾಲನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ನಿಮ್ಹಾನ್ಸ್ನ ಎಪಿಡೀಮಿಯಾಲಜಿ ವಿಭಾಗ, ಜನ ಆರೋಗ್ಯ ಕೇಂದ್ರವನ್ನು ನಾನು ಅಭಿನಂದಿಸುತ್ತೇನೆ. “ಯುವ ಸ್ಪಂದನ” ಕಾರ್ಯಕ್ರಮಕ್ಕೆ ನನ್ನ ಶುಭಾಶಯಗಳು.