- ನಮ್ಮ ಯುವ ಪರಿವರ್ತಕರಾಗಿ
- ನಮ್ಮ ಯುವ ಸಮಾಲೋಚಕರಾಗಿ
- ಇಂಟರ್ನ್ ಶಿಪ್ ಮಾಡುವ ಮೂಲಕ
- ಅರಿವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ
- ನೀವು ತಜ್ಞರಾಗಿದ್ದಲ್ಲಿ ನಮ್ಮ ಉಲ್ಲೇಖಿತ ಅರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನ ನೀಡಲು ನಿಮ್ಮ ಸಂಸ್ಥೆಯನ್ನು ನಮ್ಮೊಂದಿಗೆ ಸಂಪನ್ಮೂಲ ವ್ಯಕ್ತಿಯಾಗುವ ಮೂಲಕ ನೀವು ಯುವ ಸ್ಪಂದನ ಕಾರ್ಯಕ್ರಮಕ್ಕೆ ಕೊಡುಗೆಯನ್ನು ನೀಡಬಹುದು
ಯುವಜನರ ಸಮಸ್ಯೆಗಳಾದ ವೃತ್ತಿ ಮತ್ತು ಶಿಕ್ಷಣ, ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧಗಳು , ವ್ಯಕ್ತಿತ್ವ ಬೆಳವಣಿಗೆ, ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ ಯುವ ಸ್ಪಂದನ ಕೇಂದ್ರವನ್ನು ಭೇಟಿಮಾಡಬಹುದು.
ಯುವ ಸ್ಪಂದನದಲ್ಲಿ ದೊರೆಯುವ ಎಲ್ಲಾ ಸೇವೆಗಳು ಉಚಿತವಾಗಿರುತ್ತದೆ. ಒಂದು ವೇಳೆ ಅರ್ಥಿಗೆ ಹಣಕಾಸಿನ ತೊಂದರೆಯಿದ್ದಲ್ಲಿ, ನಾವು ಕ್ರೂಢೀಕರಿಸಿರುವ ಸಂಪನ್ಮೂಲಗಳಲ್ಲಿ/ಸಂಸ್ಥೆಗಳಲ್ಲಿ ಹಣಕಾಸಿನ ನೆರವಿನ ಅಗತ್ಯವಿದ್ದರೆ, ಹಣಕಾಸಿಗೆ ಸಂಬಂಧಿಸಿದಂತೆ ನೆರವು ನೀಡುವಂತಹ ಸಂಸ್ಥೆಗಳಿದ್ದಲ್ಲಿ ಅಂತಹ ಸಂಸ್ಥೆಗಳಿಗೆ ಅರ್ಥಿಗಳನ್ನು ರೆಫರ್ (ಉಲ್ಲೇಖ) ಮಾಡಲಾಗುವುದು.
ಯುವ ಸ್ಪಂದನದಲ್ಲಿ ದೊರೆಯುವ ಎಲ್ಲಾ ಸೇವೆಗಳು ಉಚಿತವಾಗಿರುತ್ತದೆ. ಒಂದು ವೇಳೆ ಅರ್ಥಿಗೆ ಆರೋಗ್ಯದ ಸಮಸ್ಯೆ ಇದ್ದಲ್ಲಿ, ನಾವು ಕ್ರೂಡೀಕರಿಸಿರುವ ಸಂಪನ್ಮೂಲಗಳಲ್ಲಿ/ ಸಂಸ್ಥೆಗಳಲ್ಲಿ ಆರೋಗ್ಯ ಸೇವೆಯನ್ನು ನೀಡುವಂತಹ, ಅರ್ಥಿಗಳ ಆಯ್ಕೆಗೆ ಅನುಗುಣವಾಗಿ ಸಂಸ್ಥೆಗಳಿದ್ದಲ್ಲಿ ಅಂತಹ ಸಂಸ್ಥೆಗಳಿಗೆ ಅರ್ಥಿಗಳನ್ನು ರೆಫರ್ (ಉಲ್ಲೇಖ) ಮಾಡಲಾಗುವುದು.
ಯುವ ಸ್ಪಂದನದಲ್ಲಿ ದೊರೆಯುವ ಎಲ್ಲಾ ಸೇವೆಗಳು ಉಚಿತವಾಗಿರುತ್ತದೆ
ಯುವ ಸ್ಪಂದನ ಕೇಂದ್ರವು ಪ್ರತೀ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿದೆ.
ಕಚೇರಿ ಸಮಯ ಬೆಳಗ್ಗೆ ೧೦.೦೦ ರಿಂದ ಸಂಜೆ ೫.೦೦ ರೊಳಗೆ ಹಾಗೂ ಎಲ್ಲಾ ಸರ್ಕಾರಿ ರಜೆಯನ್ನು ಹೊರತುಪಡಿಸಿ
ಯುವ ಪರಿವರ್ತಕ ಅಥವಾ ಯುವ ಸಮಾಲೋಚಕರಾಗುವ ಮೂಲಕ
“ಯುವ ಸ್ಪಂದನ ಕೇಂದ್ರಗಳ ಮಾಹಿತಿ” ಮತ್ತು “ಮೂಲ ತಂಡ” ಪುಟವನ್ನು ಪರಿಶೀಲಿಸಿ