ಉತ್ತಮ ಆಹಾರ, ದೈನಂದಿನ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಇವು ಆರೋಗ್ಯಕರ ಜೀವನಕ್ಕೆ ಅಡಿಪಾಯವಾಗಿದೆ. ಆರೋಗ್ಯಕರ ಜೀವನ ಶೈಲಿ ನಿಮ್ಮನ್ನು ಸದಾ ಸದೃಢವಾಗಿ, ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯಕರ ಜೀವನವು, ಸಂತಸ ಜೀವನಕ್ಕೆ ಸುಲಭ ಮಾರ್ಗವಾಗಿದೆ.
ಮನುಷ್ಯನ ಆರೋಗ್ಯ ಮತ್ತು ಜೀವನಶೈಲಿಯು ಅನಾರೋಗ್ಯ, ಗಾಯ ಮತ್ತು ಕಾಯಿಲೆಗಳನ್ನುಂಟು ಮಾಡುವ ಅಪಾಯಕಾರಿ ನಡವಳಿಕೆಗಳನ್ನು ಒಳಗೊಂಡಿವೆ. ವರ್ತನೆಗಳು ಕ್ರಿಯಾತ್ಮಕವೂ ಹಾಗೂ ಪರಿವರ್ತನಾಶೀಲವೂ ಆದ ಕಾರಣ ಜನರಿಗೆ ಬದಲಾಗಲು ಮತ್ತು ಆರೋಗ್ಯಕರ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.

ಆರೋಗ್ಯಕರ ನಡವಳಿಕೆಗಳನ್ನು ಜೀವನದ ಆರಂಭದಲ್ಲಿಯೇ ಕಲಿಯುವುದು ಅಗತ್ಯ. ಇದರಿಂದಾಗಿ ಅವು ನಮಗೆ ಆರೋಗ್ಯಕರ ಅಭ್ಯಾಸವಾಗಿ ಮಾರ್ಪಡುತ್ತವೆ ಮತ್ತು ಜೀವನದುದ್ದಕ್ಕೂ ಸಾಸ್ಥ್ಯವನ್ನು ಖಚಿತಪಡಿಸುತ್ತದೆ. ಆರೋಗ್ಯ ಮತ್ತು ಆರೋಗ್ಯಕರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಈ ಕೆಳಕಂಡ ಕಾರಣಗಳಿಗಾಗಿ ಯುವಕರನ್ನು ಪ್ರೇರೇಪಿಸಬೇಕಿದೆ.
  • ದೈಹಿಕ ಮತ್ತು ಮಾನಸಿಕ ಬೆಳವಣಿಕೆ ಯೌವನಾವಸ್ಥೆಯ ಒಂದು ಹಂತ, ಆರೋಗ್ಯಕರ ಜೀವನವನ್ನು ನಡೆಸಲು ಆರಂಭದಿಂದಲೇ ಆರೋಗ್ಯಕರ ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ಒಂದು ಹೂಡಿಕೆಯಿದ್ದಂತೆ , ಏಕೆಂದರೆ ಅವರು ತಮ್ಮ ನಡವಳಿಕೆಗೆ ತಾವೇ ಜವಾಬ್ದಾರರಾಗುತ್ತಾರೆ.
  • ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಕೊಳ್ಳುವುದರಿಂದ, ಹಲವಾರು ಮಾನಸಿಕ ಅಸರ‍್ಪಕತೆಗಳಿಂದ ಉತ್ತೇಜಿಸಲ್ಪಟ್ಟ ಒತ್ತಡದಿಂದಾಗಿ ವಿವಿಧ ವ್ಯಸನಗಳಿಗೆ ತುತ್ತಾಗುವಂತಹ ಸಮಸ್ಯೆಗಳನ್ನು ತಡೆಯಬಹುದು ಅಥವಾ ಈ ವ್ಯಸನಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅವುಗಳನ್ನು ನಿಲ್ಲಿಸಬಹುದು 
ಈ ರೀತಿಯ ಬದಲಾವಣೆಗಳನ್ನು ತರುವಲ್ಲಿ ನಮ್ಮ ಯುವ ಸ್ಪಂದನ ಕೇಂದ್ರದ ಯುವಪರಿವರ್ತಕರು ಹಾಗೂ ಯುವ ಸಮಾಲೋಚಕರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ನಾನಾ ರೀತಿಯ ಆರೋಗ್ಯ ಮತ್ತು ಜೀವನ ಶೈಲಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಯುವ ಸ್ಪಂದನ ಕೇಂದ್ರದಲ್ಲಿ ಸರಿಯಾದ ಮಾರ್ಗದರ್ಶನ, ಸಮಾಲೋಚನೆ ಹಾಗೂ ಹೆಚ್ಚಿನ ಮಾರ್ಗದರ್ಶನ ಹಾಗೂ ಸೇವೆಯ ಉದ್ದೇಶದಿಂದ ಉಲ್ಲೇಖಿತ ಸೇವೆಗಳನ್ನು ಒದಗಿಸಲಾಗುವುದು
ಯುವ ಸ್ಪಂದನವು ಮಾರ್ಗದರ್ಶನ ನೀಡುವ ಆರೋಗ್ಯ ಮತ್ತು ಜೀವನ ಶೈಲಿಯ ವಿಷಯಗಳು
  • ದೈಹಿಕ ಆರೋಗ್ಯ
  • ಮಾನಸಿಕ ಆರೋಗ್ಯ
  • ಆಧ್ಯಾತ್ಮಿಕ ಆರೋಗ್ಯ
  • ಸಕಾರಾತ್ಮಕ ಚಿಂತನೆ
  • ವ್ಯಸನಗಳ ನಿರ್ವಹಿಸುವಿಕೆ (ಮದ್ಯಪಾನ, ತಂಬಾಕು, ತಂತ್ರಜ್ಞಾನ, ಅಂರ್ತಜಾಲ, ಮೊಬೈಲ್ ಫೋನ್)

ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ