ಯುವಜನರ ಎಲ್ಲಾ ಅವಶ್ಯಕತೆಗಳಿಗೆ ಯುವ ಸ್ಪಂದನವು ಒಂದೇ ವೇದಿಕೆ
ಯುವಜನರಲ್ಲಿ ಅಡಗಿರುವ ನಿಜವಾದ ಸಾಮರ್ಥ್ಯವನ್ನು ಕಂಡುಹಿಡಿಯುವುದು ಮತ್ತು ಉತ್ತಮ ಜೀವನವನ್ನು ನಡೆಸಲು ಯುವಜನರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ಸರಿಯಾದ ಸಮಯದಲ್ಲಿ ಸಿಗುವ ಸರಿಯಾದ ಮಾರ್ಗದರ್ಶನವು ಜೀವನ, ವೃತ್ತಿ, ವ್ಯಕ್ತಿತ್ವ, ಸಂಬಂಧಗಳು ಮತ್ತು ಗುರಿಯನ್ನು ತಲುಪುವಲ್ಲಿ ನಮಗೆ ಸಹಾಯ ಮಾಡುತ್ತದೆ.
ನಮ್ಮ ಯುವ ಪರಿವರ್ತಕರು ಹಾಗೂ ಯುವ ಸಮಾಲೋಚಕರು ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ೨೧ನೇ ಶತಮಾನದಲ್ಲಿ ಸವಾಲುಗಳನ್ನು ಎದುರಿಸಲು ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶೇಷವಾಗಿ ಯುವಜನರಿಗಾಗಿ ನಡೆಸುವ ಯುವ ಸ್ಪಂದನ ಕಾರ್ಯಕ್ರಮಗಳಿಗೆ ನೀವು ನಿಮ್ಮಲ್ಲಾದ ಸಹಾಯವನ್ನು ಮಾಡಬಹುದು.
ಆದಾಗ್ಯೂ, ಇದು ನಮ್ಮಿಂದ ಮಾತ್ರ ಸಾಧ್ಯವಿಲ್ಲ!  ಹನಿ ಹನಿ ಸೇರಿ ಸಾಗರವಾದಂತೆ, ಅಗತ್ಯವಿರುವವರಿಗೆ ಪ್ರತೀ ರೂಪಾಯಿ ಕೂಡ ಅಮೂಲ್ಯವಾದದ್ದು,

ನೀವು ಕೊಡುಗೆ ನೀಡಲು ಸಿದ್ಧರಿದ್ದರೆ ನಮ್ಮನ್ನು ಸಂಪರ್ಕಿಸಿ.

ನಿಮ್ಮ ಕೊಡುಗೆ ಯುವಜನರಿಗೆ ಮತ್ತು ಯುವ ಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಭವಿಷ್ಯವನ್ನು ನೀಡುತ್ತದೆ