ನಮ್ಮ ಯುವ ಪರಿವರ್ತಕರು ಸಮುದಾಯದಲ್ಲಿನ ಯುವ ಜನಾಂಗದೊಂದಿಗೆ ಕಾರ್ಯಪ್ರವೃತ್ತರಾಗಿರುವುದರಿಂದ ಇಂತಹ ಸಂಗತಿಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದು (ಮುಖ್ಯವಾಗಿ ದೈಹಿಕ, ಭಾವನಾತ್ಮಕ, ಸಂತಾನೋತ್ಪಾದಕ ಮತ್ತು ಲೈಂಗಿಕ) ಹಾಗೂ ವಿವಿಧ ಲೈಂಗಿಕ ಗುಂಪುಗಳೊಂದಿಗೆ ಕಾರ್ಯ ನಿರ್ವಹಿಸುವುದರಿಂದ ವಿವಿಧ ಲಿಂಗದ ಜನರ ಜೀವನದ ಆಯ್ಕೆಗಳು ಮತ್ತು ತೀರ್ಮಾನಗಳು ಹೇಗೆ ವಿಭಿನ್ನವಾಗಿರುತ್ತದೆ, ಲೈಂಗಿಕ ಧೋರಣೆಗಳು, ಕಾರ್ಯ ಸ್ವರೂಪಕ್ಕನುಗುಣವಾಗಿ ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಪಟ್ಟ ವಿವಿಧ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳೊಡನೆ ಹೇಗೆ  ವ್ಯವಹರಿಸಬೇಕು ಹಾಗೂ ಮಾರ್ಗರ್ದಶನವನ್ನು ನೀಡಬೇಕೆಂಬ ಅರಿವು ನಮ್ಮ ಯುವಪರಿವರ್ತಕರಿಗಿರುತ್ತದೆ.
 ಯುವ ಸ್ಪಂದನವು ಮಾರ್ಗದರ್ಶನ ನೀಡುವ ಲಿಂಗ ಮತ್ತು ಲೈಂಗಿಕತೆಯ ವಿಷಯಗಳು 
  • ಲಿಂಗ ತಾರತಮ್ಯ
  • ಲಿಂಗ ಆಧಾರಿತ ಹಿಂಸೆಗಳ ನಿಭಾಯಿಸುವಿಕೆ
  • ಲೈಂಗಿಕ ಅತ್ಯಾಚಾರದಿಂದ ರಕ್ಷಣೆ
  • ಲೈಂಗಿಕತೆಯ ಮೂಲಕ ಹರಡುವ ಸೋಂಕುಗಳನ್ನು ತಡೆಗಟ್ಟುವಿಕೆ 

ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ