- ನಿಮ್ಮ ಶಾಲಾ-ಕಾಲೇಜು/ಸಂಘ-ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮವನ್ನು ಆಯೋಜಿಸಲು ಬಯಸುವಿರಾ ?
೧೦ ರಿಂದ ೫೦೦ ಜನರಿಗೆ ಆಸನ ವ್ಯವಸ್ಥೆಯಿರುವ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮವನ್ನು ಆಯೋಜಿಸಬಹುದು. ನಿಮ್ಮ ಸಂಸ್ಥೆಯಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸಲು ನೀವು ಬಯಸಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ - ನಿಮ್ಮ ಸಂಸ್ಥೆಯನ್ನು ಸಂಪನ್ಮೂಲ ಕೇಂದ್ರವನ್ನಾಗಿಸಲು ಬಯಸುವಿರಾ ?
ನಿಮ್ಮ ಸಂಸ್ಥೆಯಲ್ಲಿ ಸಿಗುವ ಸೇವೆಯನ್ನು ಎಲ್ಲರೂ ಉಪಯೋಗಿಸಿಕೊಳ್ಳಲು ಬಯಸುವಿರಾ? ಹೌದು ಎಂದಾದರೆ ನಮ್ಮನ್ನು ಸಂಪರ್ಕಿಸಿ ನಾವು ನಿಮ್ಮ ಸಂಸ್ಥೆಯನ್ನು ನಮ್ಮ ಸಂಪನ್ಮೂಲ ಕ್ರೂಡೀಕರಣ ನಕ್ಷೆಯಲ್ಲಿ ಒಳಪಡಿಸುತ್ತೇವೆ. ನಮ್ಮಲ್ಲಿ ಮಾರ್ಗದರ್ಶನಕ್ಕಾಗಿ ಬರುವ ಅರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆ ಇದ್ದಲ್ಲಿ ಅವರ ಸಮಸ್ಯೆಗಳಿಗೆ ಅನುಗುಣವಾಗಿ ನಿಮ್ಮ ಸಂಸ್ಥೆಗಳಿಗೆ ಅವರುಗಳನ್ನು ರೆಫರ್ ಮಾಡುತ್ತೇವೆ. - ಜೀವನ ಕೌಶಲ್ಯ ತರಬೇತಿಯನ್ನು ಪಡೆಯಲು ಬಯಸುವಿರಾ ?
ಜೀವನ ಕೌಶಲ್ಯ ತರಬೇತಿ ಮತ್ತು ಸಮಾಲೋಚನೆ ಸೇವೆಗಳ ಕಾರ್ಯಕ್ರಮವು ೬ದಿನಗಳ ತರಬೇತಿ ಕಾರ್ಯಕ್ರಮವಾಗಿದ್ದು, ವಿವಿದ ಅನುಭವ ಕಲಿಕೆಯ ತಂತ್ರಗಳನ್ನು ಬಳಸಿಕೊಂಡು ಕೌಶಲ್ಯಗಳನ್ನು ಕಲಿಯುವ ಪ್ರಕ್ರಿಯೆಯಾಗಿದೆ. ಈ ತರಬೇತಿಯಲ್ಲಿ ನೈಸರ್ಗಿಕ ಕಲಿಕೆಯು, ನಾವು ಇತರರು ಮಾಡುವುದನ್ನು ನೋಡಿ ಅಥವಾ ಅವರು ಗಮನಿಸಿ ಕಲಿಯುತ್ತೇವೆಂಬ ನಂಬಿಕೆಯನ್ನು ಆಧರಿಸಿದೆ. ಜೀವನ ಕೌಶಲ್ಯ ತರಬೇತಿಯನ್ನು ನೀಡುವಾಗ ವ್ಯಕ್ತಿಯು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆ ಅಥವಾ ತೊಂದರೆಗಳನ್ನು ಉತ್ತಮವಾಗಿ ಎದುರಿಸುವ ತಂತ್ರಗಳನ್ನು ಕಲಿಸುವ ಹಾಗೂ ನೈಜ ಜೀವನದ ಪರಿಸ್ಥಿತಿಯನ್ನು ಕಲಿಕೆಯಲ್ಲಿ ಅನುಕರಿಸಲು ಸಾಧ್ಯವಿದೆ ಎಂದು ತರಬೇತಿಯ ವಿಧಾನ ಸಾಬೀತುಪಡಿಸಿದೆ. ನೀವೂ ಕೂಡ ತರಬೇತಿಗಾಗಿ ದಾಖಲಾಗಲು ಬಯಸಿದ್ದಲ್ಲಿ, ನಮ್ಮನ್ನು ಸಂಪರ್ಕಿಸಿ - ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಬೇಕೆ?
ನೀವು ಪದವಿಧರರಾಗಿದ್ದು, ಯುವ ಜನರ ಸುಧಾರಣೆಗಾಗಿ ಹಾಗೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವುದಕ್ಕೆ ಆಸಕ್ತಿ ಹೊಂದಿದ್ದಲ್ಲಿ, ನಮ್ಮ
ಜಿಲ್ಲಾವಾರು ಖಾಲಿಹುದ್ದೆಗಳ ಮಾಹಿತಿಯನ್ನು (ಖಾಲಿಹುದ್ದೆಗಳ ವಿವರ) ಪಡೆದು ಅರ್ಜಿಯನ್ನು ಸಲ್ಲಿಸಬಹುದು - ನಮ್ಮೊಂದಿಗೆ ಸಹಯೋಗ ಹೊಂದಲು ಬಯಸುವಿರಾ?
ನಿಮ್ಮ ಸಂಘ ಸಂಸ್ಥೆ/ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಬಹುದು.
ಬನ್ನಿ ಜಾಗೃತಿ ಮೂಡಿಸೋಣ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ