ಯುವಪರಿವರ್ತಕರಾಗಿ ನಮ್ಮೊಂದಿಗೆ ಕೆಲಸ ಮಾಡಲು ಬಯಸುವಿರಾ ? ಹೌದು ಎಂದಾದರೆ ಯುವ ಪರಿವರ್ತಕರ ಆಯ್ಕೆಗೆ ಕೆಳಗೆ ನೀಡಲಾದ ಅರ್ಹತಾ ಮಾನದಂಡಗಳು, ಸೂಚನೆಗಳು ಹಾಗೂ ನಮೂನೆಯನ್ನು ನೋಡಿ.
ಯುವ ಪರಿವರ್ತಕರ ಆಯ್ಕೆಯ ಮಾನದಂಡಗಳು
- ಸಂಬಂಧಿಸಿದ ಜಿಲ್ಲೆಯ ನಿವಾಸಿಯಾಗಿರಬೇಕು ಮತ್ತು ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಅರಿವು ಇರಬೇಕು
- ೨೧ ವರ್ಷಗಳಿಗಿಂತ ಮೇಲ್ಪಟ್ಟು ೩೫ ವರ್ಷಗಳ ಒಳಗಿರಬೇಕು
- ಕನ್ನಡದ ವ್ಯಾವಹಾರಿಕ ಜ್ಞಾನ ಕಡ್ಡಾಯ
- ಕನಿಷ್ಠ ಪದವಿ ಶಿಕ್ಷಣ ಉತ್ತೀರ್ಣರಾಗಿರಬೇಕು
- ಅವರು ಕಾರ್ಯಕ್ರಮ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲೆಯ ಒಳಗೆ ಹಾಗೂ ತರಬೇತಿಗಾಗಿ ಜಿಲ್ಲೆಯ ಹೊರಗೆ ಪ್ರಯಾಣಿಸಬೇಕಾಗುತ್ತದೆ
- ಮೈಕ್ರೊಸಾಫ್ಟ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್‌ಗಳ ಕಂಪ್ಯೂಟರ್ ಜ್ಞಾನದ ಅರಿವಿರಬೇಕು
- ಉತ್ತಮ ಸಂವಹನ ಕೌಶಲ್ಯವಿರಬೇಕು
- ಸಾಮುದಾಯಿಕ ಕೆಲಸ ಕಾರ್ಯಗಳಲ್ಲಿನ ಅನುಭವ ಅವಶ್ಯಕ
- ಯುವ ಪರಿವರ್ತಕ / ಯುವ ಪರಿವರ್ತಕಿಯರು ಸಂಬಂಧಿಸಿದ ಜಿಲ್ಲೆಯ ಯುವ ಜನರ ಸುಧಾರಣೆಗಾಗಿ ಕಾರ್ಯ ನಿರ್ವಹಿಸುವುದಕ್ಕೆ ಆಸಕ್ತಿ ಹೊಂದಿರಬೇಕು