ವ್ಯಕ್ತಿತ್ವವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳ ರೂಪವಾಗಿದೆ. ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಸಾಂದರ್ಭಿಕ ಬೇಡಿಕೆಗಳಿಂದಾಗಿ ವ್ಯಕ್ತಿತ್ವದ ಲಕ್ಷಣಗಳು ಬದಲಾಗಬಹುದು. ಆದ್ದರಿಂದ ವ್ಯಕ್ತಿತ್ವವು ಸಂದರ್ಭಗಳಿಗೆ ಹೊಂದಿಕೊಂಡಿರುತ್ತದೆ . ನಾವು ಇನ್ನೊಬ್ಬರ ವ್ಯಕ್ತಿತ್ವವನ್ನು ಅವಲೋಕಿಸಲು ಸಾಧ್ಯವಾದ ನಂತರ, ಆ ವ್ಯಕ್ತಿಯು ವಿವಿಧ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಅರಿಯಬಹುದು.  
ಒಬ್ಬರ ವ್ಯಕ್ತಿತ್ವದ ಕುರಿತು ತಿಳುವಳಿಕೆ ಹೊಂದಿರುವವರೊಂದಿಗೆ ವಾಸ್ತವಿಕ ಹಾಗೂ ಸ್ವೀಕಾರಾರ್ಹ ರೀತಿಯಲ್ಲಿ ವ್ಯವಹರಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ನಿಮ್ಮ ಸ್ನೇಹಿತ ಅಥವಾ ಸಹೋದ್ಯೋಗಿ ಆದೇಶಮಾಡುವುದನ್ನು ಇಷ್ಟಪಡದಿದ್ದಾಗ ಅವರೊಂದಿಗೆ ನಯವಾಗಿ ಮಾತನಾಡಿ ನಮ್ಮ ಕಾರ್ಯಸಾಧನೆ ಮಾಡಬೇಕು. ಹಾಗೇಯೇ ಕೀಳರಿಮೆ ಮನೋಭಾವನೆಗಳನ್ನು ಹೊಂದಿರುವವರೊAದಿಗೆ ಮಾತನಾಡುವಾಗ ಅವರಲ್ಲಿ ಆತ್ಮವಿಶ್ವಾಸ ತುಂಬಿ ಮಾತನಾಡಬೇಕು.
ಒಬ್ಬ ವ್ಯಕ್ತಿಯ ಅಂದರೆ ಅವನು/ಅವಳು ಸಕಾರಾತ್ಮಕ ಚಿಂತನೆ, ನಡವಳಿಕೆ ಮತ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವ ವಿಧಾನದಲ್ಲಿನ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಯೌವನವು ಒಂದು ನಿರ್ಣಾಯಕ ಹಂತವಾಗಿದೆ. ಈ ರೀತಿಯ ಆರೋಗ್ಯಕರ ಬೆಳವಣಿಗೆಯು ಯುವಜನರು ತಮ್ಮ ಜೀವನವನ್ನು ಎದುರಾಗುವ ಸಂದರ್ಭಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಅವರನ್ನು ದೈಹಿಕ, ಸಾಮಾಜಿಕ ಹಾಗೂ ಮಾನಸಿಕವಾಗಿ ಸಿದ್ದಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ವ್ಯಕ್ತಿತ್ವ ಬೆಳವಣಿಗೆಯೂ ಯುವಜನರಿಗೆ ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಅಥವಾ ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಅವರ ವೈಯುಕ್ತಿಕ ಹಾಗೂ ವೃತ್ತಿಪರ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ಅವರನ್ನು ಸದೃಢಗೊಳಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳದಿದ್ದರೆ ಅವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಂಪ್ಯೂಟರ್ ಕೌಶಲ್ಯವನ್ನು ಕಲಿಯಲು ಹೇಗೆ ತರಬೇತಿಯ ಅವಶ್ಯಕತೆ ಇದೇಯೋ ಅದೇ ರೀತಿ ಆರೋಗ್ಯಕರ ವ್ಯಕ್ತಿತ್ವದ ಬೆಳವಣಿಗೆಗೂ ತರಬೇತಿ/ಮಾರ್ಗದರ್ಶನ/ಸಹಾಯದ ಅಗತ್ಯವಿರುತ್ತದೆ. ಆರೋಗ್ಯಕರ ವ್ಯಕ್ತಿತ್ವ ಬೆಳವಣಿಗೆಯಿಂದ ಒತ್ತಡ ಮತ್ತು ಸಂಘರ್ಷಗಳು ಕಡಿಮೆಯಾಗುತ್ತದೆ.  ನಮ್ಮ ಯುವಪರಿವರ್ತಕರು ಅರಿವು ಕಾರ್ಯಕ್ರಮಗಳನ್ನು ನಡೆಸುವಾಗ ವ್ಯಕ್ತಿತ್ವ ಬೆಳವಣಿಗೆಯ ಮಹತ್ವವನ್ನು ಹಾಗೂ ಅಗತ್ಯತೆಗಳನ್ನು ತಿಳಿಸುತ್ತಾರೆ. ವ್ಯಕ್ತಿತ್ವದ ಅಭಿವೃದ್ದಿಗೆ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸ್ಥಾಪಿತವಾಗಿರುವ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು.
ಯುವ ಸ್ಪಂದನವು ಮಾರ್ಗದರ್ಶನ ನೀಡುವ ವ್ಯಕ್ತಿತ್ವ ಬೆಳವಣಿಗೆ ವಿಷಯಗಳು 
  • ಸ್ವ-ಅರಿವು
  • ಆತ್ಮ ಗೌರವ
  • ಭಾವನಾತ್ಮಕ ಸಮಸ್ಯೆಗಳು
  • ಆಲೋಚನೆಯ ಮಾದರಿ
  • ಭಾವನೆಗಳ ನಿಭಾಯಿಸುವಿಕೆ

ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ