ಮನುಷ್ಯನು ಸಂಘ ಜೀವಿ ಅವನು ಹುಟ್ಟಿನಿಂದ ಸಾಯುವವರೆಗೂ ಅವನ ಸುತ್ತಲಿನ ಎಲ್ಲರೊಂದಿಗೆ ಸಂವಹನ ನಡೆಸುತ್ತಾನೆ ಮತ್ತು ಅವನ ವ್ಯಕ್ತಿತ್ವ ಮತ್ತು ಅವನ ಪಥವನ್ನು ರೂಪಿಸುವ ಸಂಬಂಧಗಳ ಜಾಲದಲ್ಲಿ ವಾಸಿಸುತ್ತಿದ್ದಾನೆ. ಸಂಬಂಧಗಳು ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಅಡಿಪಾಯಗಳಾಗಿವೆ. ಸಂಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟವಾದಾಗ ಏನು ಮಾಡಬೇಕು ಎಂದು ತಿಳಿದುಕೊಳ್ಳುವ ಮೊದಲು ಸಂಬಂಧಗಳು ಏಕೆ ಮುಖ್ಯವೆಂಬುದನ್ನು ತಿಳಿದುಕೊಳ್ಳೋಣ

 • ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು ಅವಶ್ಯಕ ಮತ್ತು ನಮಗಾಗಿ ನಮ್ಮ ಕುಟುಂಬದವರಿದ್ದಾರೆ ಎಂಬ ನಂಬಿಕೆಯನ್ನು ಉಂಟು ಮಾಡಲು 
 • ಪರಸ್ಪರ ಪ್ರೀತಿಯಲ್ಲಿರುವ ಹುಡುಗ ಮತ್ತು ಹುಡುಗಿಗೆ ತಾವು ಯಾವ ರೀತಿಯ ಸಂಬಂಧವನ್ನು ಇಟ್ಟುಕೊಂಡರೆ ಉತ್ತಮವೆಂದು ನಿರ್ಣಯಿಸಲು.
 • ಸ್ನೇಹಿತರಲ್ಲಿ ಉತ್ತಮ ಸಂಬಂಧವನ್ನು ಹೊಂದಿರುವುದು ಮುಖ್ಯವಾಗಿದೆ ಏಕೆಂದರೆ ಪೋಷಕರಲ್ಲಿ ಚರ್ಚಿಸಲು ಸಾಧ್ಯವಾಗದ  ಕೆಲವು ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚಿಸಬೇಕಾದಾಗ
 • ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಸಂಬಂಧಗಳು ವಿಭಿನ್ನವಾಗಿರುತ್ತದೆ ಎಂದು ತಿಳಿಯಲು 
 • ಒಬ್ಬ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧವಿದ್ದರೆ ಮಾತ್ರ ನಮ್ಮ ಅನಿಸಿಕೆಗಳನ್ನುಸುಲಭವಾಗಿ ಹಂಚಿಕೊಳ್ಳಲು 
 • ಒಬ್ಬರ ಆಲೋಚನೆಯ ಮಾದರಿ, ಗೌರವ, ನಂಬಿಕೆ, ಸಂವಹನ ಇನ್ನು ಹಲವಾರು ಅಂಶಗಳನ್ನು ಅರಿಯಲು
ಯುವ ಸ್ಪಂದನವು ಸಂಬಂಧಗಳ ನಡುವಿನ ವಿವಿಧ ಸಮಸ್ಯೆಗಳಿಗೆ ಮಾರ್ಗದರ್ಶನವನ್ನು ಒದಗಿಸುತ್ತದೆ.
ಯುವಜನರ ನಡುವಿನ, ಯುವಜನ ಮತ್ತು ಅವರ ಕುಟುಂಬದ ನಡುವಿನ, ಯುವಜನ ಮತ್ತು ಅವರ ಗೆಳೆಯರ ನಡುವಿನ ಹಾಗೂ ಯುವಜನ ಮತ್ತು ಸಮಾಜದ ನಡುವಿನ ಸಂಬಂಧಗಳು ಇದರಲ್ಲಿ ಸೇರಿವೆ. ಕುಟುಂಬದ ಸದಸ್ಯರೊಡನೆ ಘರ್ಷಣೆಗಳು, ಪ್ರೀತಿ-ಪ್ರೇಮ ಸಂಬಂಧಗಳು , ಬೆದರಿಕೆ, ಹೊಡೆದಾಟ, ಗೆಳೆತನದ ಸಮಸ್ಯೆಗಳು ಹಾಗೂ ವ್ಯಕ್ತಿತ್ವ ಸಂಬಂಧಿ ಸಮಸ್ಯೆಗಳು ಇವೇ ಮೊದಲಾದವುಗಳಿಗೆ ಯುವ ಸ್ಪಂದನ ಕೇಂದ್ರಗಳಿಗೆ ಬಂದ ಯುವಜನರಿಗೆ, ಯುವ ಪರಿವರ್ತಕರು ಅವುಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಈ ಮೂಲಕ ಯುವ ಪರಿವರ್ತಕರು ಅವುಗಳನ್ನು ಅಲ್ಲಿಯೇ ನಿರ್ವಹಿಸಲು ಸಾಧ್ಯವೇ ಅಥವಾ ಬೇರೆಡೆಗೆ ಕಳುಹಿಸಬೇಕೇ ಎಂಬುದನ್ನು ಪರಿಶೀಲಿಸುತ್ತಾರೆ. ತಲೆಮಾರುಗಳ ನಡುವೆ ತಲೆದೋರುವ ಘರ್ಷಣೆಗಳು, ಇತರರೊಂದಿಗೆ ಯುವಜನರ ನಡವಳಿಕೆ, ಸಂಬಂಧಗಳ ಬಿರುಕಿನ ನಂತರದ ಮಾನಸಿಕ ಸಮಸ್ಯೆಗಳು, ಕೆಟ್ಟ ಸಹವಾಸಗಳು ಇತ್ಯಾದಿ ಸಮಸ್ಯೆಗಳನ್ನು ನಿರ್ವಹಿಸಲು ಯುವ ಸ್ಪಂದನ ಸಹಾಯ ಮಾಡುತ್ತದೆ.
ಯುವ ಸ್ಪಂದನವು ಮಾರ್ಗದರ್ಶನ ನೀಡುವ ಸಂಬಂಧದ ವಿಷಯಗಳು
 • ತಂದೆ ತಾಯಿಯ ಜೊತೆಗಿನ ಸಂಬಂಧ
 • ಅಂತರ ಪೀಳಿಗೆಯ ಸಂಬಂಧಗಳು
 • ವೈವಾಹಿಕ ಸಂಬಂಧಗಳು
 • ಪ್ರೇಮ ಸಂಬಂಧಗಳು
 • ಸ್ನೇಹಿತರ/ಸಹೋದ್ಯೋಗಿಗಳೊಂದಿಗಿನ ಸಂಬಂಧ
 • ವರ್ಚುಅಲ್ ಸಂಬಂಧ
 • ಆರೋಗ್ಯಕರ ಸಂಬಂಧಗಳು 

ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ