ಶಿಕ್ಷಣ ಮತ್ತು ವೃತ್ತಿ ವಿಷಯಗಳು
ಶಿಕ್ಷಣದ ಮುಖ್ಯ ಗುರಿ ಯುವಕರಿಗೆ ಅಗತ್ಯವಾಗ ಕೌಶಲ್ಯ ಪಡೆಯಲು ಸಹಾಯ ಮಾಡುವುದು ಮತ್ತು ಅವರು ಆಯ್ಕೆ ಮಾಡಿದ ಹಾಗೂ ಅವರ ಆಸಕ್ತಿಹೊಂದಿರುವ ಕ್ಷೇತ್ರಗಳಲ್ಲಿ ಅಗತ್ಯ ಪರಿಣತಿಯನ್ನು ಅಭಿವೃದ್ಧಿಪಡಿಸುವುದು. ಶಿಕ್ಷಣವು ಒಬ್ಬ ವ್ಯಕ್ತಿಯ ಅಭಿವೃದ್ಧಿ, ಉತ್ತಮ ಆಡಳಿತಗಾರ ಹಾಗೂ ಪ್ರಗತಿಯ ಪ್ರತಿನಿಧಿಯನ್ನಾಗಿಸುತ್ತವೆ
ಆರೋಗ್ಯ ಮತ್ತು ಜೀವನಶೈಲಿ
ಮನುಷ್ಯನ ಆರೋಗ್ಯ ಮತ್ತು ಜೀವನಶೈಲಿಯು ಅನಾರೋಗ್ಯ, ಗಾಯ ಮತ್ತು ಕಾಯಿಲೆಗಳನ್ನುಂಟು ಮಾಡುವ ಅಪಾಯಕಾರಿ ನಡವಳಿಕೆಗಳನ್ನು ಒಳಗೊಂಡಿವೆ. ವರ್ತನೆಗಳು ಕ್ರಿಯಾತ್ಮಕವೂ ಹಾಗೂ ಪರಿವರ್ತನಾಶೀಲವೂ ಆದ ಕಾರಣ ಜನರಿಗೆ ಬದಲಾಗಲು ಮತ್ತು ಆರೋಗ್ಯಕರ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.
ಸಂಬಂಧಗಳು
ಮನುಷ್ಯನು ಸಂಘ ಜೀವಿ ಅವನು ಹುಟ್ಟಿನಿಂದ ಸಾಯುವವರೆಗೂ ಅವನು ಸುತ್ತಲಿನ ಎಲ್ಲರೊಂದಿಗೆ ಸಂವಹನ ನಡೆಸುತ್ತಾನೆ ಮತ್ತು ಅವನ ವ್ಯಕ್ತಿತ್ವ ಮತ್ತು ಅವನ ಪಥವನ್ನು ರೂಪಿಸುವ ಸಂಬಂಧಗಳ ಜಾಲದಲ್ಲಿ ವಾಸಿಸುತ್ತಿದ್ದಾನೆ. ಸಂಬಂಧಗಳು ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಅಡಿಪಾಯಗಳಾಗಿವೆ.
ವ್ಯಕ್ತಿತ್ವ ಬೆಳವಣಿಗೆ
ವ್ಯಕ್ತಿತ್ವ ಅಭಿವೃದ್ದಿಯ ಪರಿಕಲ್ಪನೆಯು ವ್ಯಕ್ತಿಯ ಗುಣಲಕ್ಷಣಗಳು ಅಥವಾ ನಿರ್ದಿಷ್ಟ ಸಮಾಜದಲ್ಲಿ ವಾಸಿಸುವ ಬಾಲ್ಯದಿಂದ ಪ್ರೌಡಾವಸ್ಥೆಯವರೆಗೆ ಭಿನ್ನವಾಗಿರುವ ವ್ಯಕ್ತಿತ್ವಗಳನ್ನು ಸೂಚಿಸುತ್ತದೆ.
ಲಿಂಗ ಮತ್ತು ಲೈಂಗಿಕತೆ
ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಪಟ್ಟ ವಿಷಯಗಳಂತಹ ಸೂಕ್ಷ್ಮ ವಿಷಯಗಳಿಗೆ ಯುವ ಸ್ಪಂದನ ಕೇಂದ್ರಗಳಲ್ಲಿ ಮಾರ್ಗದರ್ಶನ ನೀಡಲಾಗುವುದು.
ಸುರಕ್ಷತೆ
ಪ್ರತಿಯೊಬ್ಬರ ಜೀವನದಲ್ಲೂ ಸುರಕ್ಷತೆ ಪ್ರಮುಖವಾದ ಅಂಶವಾಗಿರುತ್ತದೆ. ಅಪಾಯಕಾರಿ ನಡವಳಿಕೆಗಳಲ್ಲಿ ಯುವ ಜನರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ದೇಶದ ಯುವ ಜನರಲ್ಲಿ ಅಪಾಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮರಣ ಮತ್ತು ಆಸ್ಪತ್ರೆಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.