ಪ್ರತಿಯೊಬ್ಬರ ಜೀವನದಲ್ಲೂ ಸುರಕ್ಷತೆ ಪ್ರಮುಖವಾದ ಅಂಶವಾಗಿರುತ್ತದೆ. ಅಪಾಯಕಾರಿ ನಡವಳಿಕೆಗಳಲ್ಲಿ ಯುವ ಜನರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ದೇಶದ ಯುವ ಜನರಲ್ಲಿ ಅಪಾಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮರಣ ಮತ್ತು ಆಸ್ಪತ್ರೆಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.
ಸುರಕ್ಷತೆ ಏಕೆ ಮುಖ್ಯ?
ಯುವಜನರು ಅರ್ಥಪೂರ್ಣ ಮತ್ತು ಉತ್ಪಾದಕ ಜೀವನವನ್ನು ಆನಂದಿಸಲು ಸುರಕ್ಷಿತವಾಗಿರುವುದು ಮುಖ್ಯ. ಸಾಮಾನ್ಯವಾಗಿ ಯೌವನದಲ್ಲಿ ಉತ್ಸಾಹವು ಹೆಚ್ಚಾಗಿದ್ದು, ಯುವಜನರು ಅಪಾಯವನ್ನು ತಂದುಕೊಳ್ಳುವಂಥಹ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ಇದರಿಂದಾಗಿ ರಸ್ತೆ ಅಪಘಾತಗಳು, ಅಪಾಯಮಟ್ಟದ ನೀರಿನಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗುವುದು, ಹಿಂಸಾಚಾರ ಹಾಗೂ ಆತ್ಮಹತ್ಯೆಗಳಂತಹ ಮುಂತಾದ ತೊಂದರೆಗಳಿಗೆ ಸಿಲುಕಲು ಕಾರಣವಾಗುತ್ತದೆ. ಈ ರೀತಿಯ ಉದ್ದೇಶಪೂರ್ವಕ ಹಾಗೂ ಉದ್ದೇಶಪೂರ್ವಕವಲ್ಲದ ಅಪಘಾತಗಳು ಅವರ ಕುಟುಂಬ, ಸ್ನೇಹಿತರ ಬಳಗ ಹಾಗೂ ಸಮುದಾಯದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದರೆ ಸುರಕ್ಷಿತ ಜೀವನವು ಯಾವಾಗಲೂ ಸಂತೋಷ, ತೊಂದರೆ ಮುಕ್ತ ವರ್ತನೆ ಹಾಗೂ ಆನಂದನಕ್ಕೆ ಯೋಗ್ಯವಾಗಿರುತ್ತದೆ. ಆದ್ದರಿಂದ ನಾವು ದಿನನಿತ್ಯದ ಜೀವನದಲ್ಲಿ ಸುರಕ್ಷಿತ ನಡವಳಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುರಕ್ಷಿತ ಸಮುದಾಯವನ್ನು ನಿರ್ಮಿಸುವ ಕೌಶಲ್ಯಗಳ ಬಗ್ಗೆ ಜ್ಞಾನವಿರಬೇಕು.
ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಯುವಜನರ ಸುರಕ್ಷತೆಗೆ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಜಿಲ್ಲಾ ಕೇಂದ್ರದಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುವುದು. ಇದು
೧) ಯುವ ಜನರನ್ನು ಗಾಯಗಳಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ಮಾಹಿತಿ
೨) ಅಪಾಯಗಳಿಂದ ಯುವ ಜನರನ್ನು ರಕ್ಷಿಸುವಲ್ಲಿ ಕುಟುಂಬ ಮತ್ತು ಸಮುದಾಯಗಳ ಪಾತ್ರ
೩) ಯುವ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರದ ಹೊಣೆಗಾರಿಕೆಗೆ
೪) ಅಲ್ಲದೆ ಸಂಬಂಧಪಟ್ಟ ಜಿಲ್ಲೆಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.
ಯುವ ಸ್ಪಂದನವು ಮಾರ್ಗದರ್ಶನ ನೀಡುವ ವಿಷಯಗಳು
- ರಸ್ತೆ ಸುರಕ್ಷತೆ
- ಲಿಂಗ ಸುರಕ್ಷತೆ
- ಭಾವನಾತ್ಮಕ ಸುರಕ್ಷತೆ
- ಸಂಬಂಧಗಳ ಸುರಕ್ಷತೆ
ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ